ಹೃದಯಕೆ ಹೆದರಿಕೆ ನೀ ಹೀಗೆ ಕಾಡಿದರೆ...
ಕಾಯುತಾ ಕೂರುವೆ..ನಾ ನಿನ್ನದೇ ದಾರಿ...
ನಿನ್ನನೇ ನೆನೆಯುವೆ..ಕನಸಲೂ ಕೋರಿ...
ಅದಾಗಲೇ....ಕಳೆದುಹೋಗಿದೆ ನನ್ನೆದೆ ಜಾರಿ..
ಪರಿತಪಿಸಿದೆ ಹೃದಯ ಈಗ ನಿನ್ನ ಸನಿಹಕೆ..
ಓ ಒಲವೇ ನಿನ್ನಾ ನಂಬಿ ಅರಳುತ್ತಿರೋ ಹೂವು ನಾನು...
ಹುಡುಕುತಾ ಎಂದು ಬರುವೆ..ನನಗಾಗಿ ನೀನು..
ಸೋತಿರುವೆ ಕಾದು ಕಾದು ನಿನ್ನದೇ ದಾರಿ...!!
*****.
ಇದೊಂದು ನೆನಪುಗಳ ಸಂಕೋಲೆ...ನನ್ನ ಕಾಡಿ-ಬೇಡಿ ಗೋಳಾಡಿಸಿ, ತೋಳಲಾಡಿಸುವ ನನ್ನೊಳಗೇ ಎಂದೂ ಮರೆಯದ ಮಾಸದ ನಿನ್ನ ನೆನಪುಗಳ ಮೆರವಣಿಗೆ....ಹೌದು ನೆನಪುಗಳು ಜೀವನದ ಜೀವಾಳ...ಕಹಿ ನೆನಪುಗಳು ಜೀವನದ ಮೆಟ್ಟಲುಗಳಾದರೆ,ಸವಿ ನೆನಪುಗಳು ಜೀವನಕ್ಕೇ ಮುನ್ನುಡಿ...ನಿನ್ನ ನೆನಪುಗಳು ಒಂಥರಾ ಮುಂಗಾರು ಮಳೆಯಂತೆ,ಒಮ್ಮೆ ಖುಷಿಯಾಗಿ ಹ್ರದಯ ಹೂವಾದರೆ, ಮತ್ತೊಮ್ಮೆ ಅತ್ತು ಕಲ್ಲಾಗುತ್ತೆ..ನೆನಪುಗಳು ಕಾಡಿ ಬೇಡಿದರೂ ಕೊನೆಗೇ ಕಣ್ಣಿರಾಗಿ ಮೌನದಿಂದ ಮುಕ್ತಾಯವಾಗುತ್ತವೆ.ಆದರೂ ಬರೆದೆ ನಾನು ನಿನ್ನ ಹೆಸರ ನನ್ನ ಬಾಳ ಪುಟದಲಿ..ಎಂದೂ ಅಳಿಯದಂತೆ..ಆ ಭಾವನೆಗಳ ಸ್ತಬ್ದರೂಪವೇ ಈ ಮೌನರಾಗ..ಮರೆತರೂ ಮರೆಯಲಾಗದ ನನ್ನೊಳಗಿನ ನೀನು..!!!
ಶುಕ್ರವಾರ, ಡಿಸೆಂಬರ್ 6, 2019
ನಾವಿಕ..!
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ