ಬುಧವಾರ, ಮೇ 27, 2015

ನಿನ್ನಾ ನೆನಪು !

ಸಾಗು ನೀ....
ದೂರ....ಬಲುದೂರ...,
ನನ್ನಾ ನೆನಪುಗಳಿಂದಾಚೆಗೇ...,
ನಾ ಮತ್ತೇ ಪ್ರೀತಿಸಲಾರೆ...,
 ನಾ ನನ್ನೇ ಕೂಡ...,
ಜೊತೆಗಿದ್ದರೆ ನೀ ಹೀಗೆ...!!! <3 <3

ಬುಧವಾರ, ಏಪ್ರಿಲ್ 15, 2015

ಜೊತೆ ಜೊತೆಯಲ್ಲಿ.....!!

ಮನಸು ಮರಳಿನ ಕಡಲು...
ಬೆಂದಿದೆ ಎದೆ ಒಡಲು...
ನಿಜವೆಂದ.. ಪ್ರೀತಿ ಸುಳ್ಳು ...
ಹೂ ದಾರಿ ..ನೋವ ಮುಳ್ಳು ...
ನಂಬಿಕೆಯೇ ಸೋತಿದೆ...
ಬರೆನು ನಾನು ಎಂದು..
ನಿನ್ನ ಕಥೆಯಲ್ಲಿ ...ಜೊತೆ ಜೊತೆಯಲ್ಲಿ...!

ನಿಂತ ದೋಣಿಯ ಕೆಳಗೆ...
ಕಡಲು ಚಲಿಸಿದ ಹಾಗೆ ...
ಕ್ಷಣ ನಾನು ..ಕಾಲ ನೀನು ...
ಅಜೀವ ಬಂದಿ ನಾನು ...
ಬಿಡುಗಡೆಯೇ.. ಮರಣ...
ಮಗುವಿನಂತೆ ಬರುವೆ...
ನಿನ್ನ ಜೊತೆಯಲ್ಲಿ..ಜೊತೆ ಜೊತೆಯಲ್ಲಿ...!!-