ಭಾನುವಾರ, ಜೂನ್ 6, 2021

ಆತ್ಮಬಂಧು...!!!

ನೀ‌ ತೊರುವ ಅಗಾಧ ಪ್ರೀತಿಗೆ, ಸೊರುತಿಹುದು ಕಣ್ಣ ಮಾಳಿಗೆ.. ನಿನ್ನ ‌ಪಡೆಯಲಾಗದ ವ್ಯತೆಗೆ, ಜನ್ಮಪೂರ್ತಿ ನಿನ್ನ ಸೇರಲಾಗದ ಸ್ತಿತಿಗೆ, ಮರೆಯಲೇಬೇಕಾದ ಅನಿವಾರ್ಯ ತೆಗೆ..... ದಿನವೂ ಶಪಿಸುವೇ ಕಾಣದ ಆ ದೇವರ... ಮತ್ತೆ ಬೇಡುವೇ ಮರುಜನ್ಮವಾ... ಅದೇ ಕಾಣದ ದೇವರ....!!! ...

ಬುಧವಾರ, ಮಾರ್ಚ್ 14, 2018

ಸ್ನೇಹಿತ..!!

ಪ್ರೀತಿ, ಮಮತೆ,ವಾತ್ಸಲ್ಯ,ಅಕ್ಕರೆಯ
ಸಮಾಗಮವೇ.. ಈ "ಸ್ನೇಹ"..!!
ಸರಿಸಾಟಿ ಮತ್ತೊಂದಿಲ್ಲ...ಈ ಬಾಂಧವ್ಯಕ್ಕೆ....!
ನಾ ಮರೆತರೂ..ಮರೆಯಲಾಗದ ನಿನ್ನ
ನೆನಪುಗಳ ಮೆರವಣಿಗೆ ನಾ ಇರುವವರೆಗೆ...!
ಏಕೆಂದರೆ ಮರೆವು ಮಿದುಳಿಗೆ ಹೊರತು..
ಈ ಪುಟ್ಟ ಹೃದಯಕ್ಕಲ್ಲ....!
ಅದಾಗಲೇ ಬರೆದೆ ನಾನು ನಿನ್ನ ಹೆಸರು..
ನನ್ನ ಬಾಳ ಪುಟದಲಿ....!
ನಿನ್ನ ಅನುಮತಿಗೂ ಕಾಯದೇ.....!
ಮರೆಯದೇ ಕ್ಷಮಿಸು....ಈ ನಿನ್ನ ದುರದೃಷ್ಟ ಗೆಳತಿಯ...
ಕೊನೆಯವರೆಗೂ ನಿನ್ನ ಜೊತೆಗೆ ಇರಲಾಗದೆ....
ಅರ್ಧಕ್ಕೆ ಎದ್ದು ಹೊದದ್ದಕ್ಕೆ.......!!
ಅದರರ್ಥ ಇಷ್ಟವಿರಲಿಲ್ಲ ಅಂತಲ್ಲ....ಮೊದಲೇ ಹೇಳಿದಂತೇ..ದುರದೃಷ್ಟೆಯೆಂದು.....!!

ಬುಧವಾರ, ಮೇ 27, 2015

ನಿನ್ನಾ ನೆನಪು !

ಸಾಗು ನೀ....
ದೂರ....ಬಲುದೂರ...,
ನನ್ನಾ ನೆನಪುಗಳಿಂದಾಚೆಗೇ...,
ನಾ ಮತ್ತೇ ಪ್ರೀತಿಸಲಾರೆ...,
 ನಾ ನನ್ನೇ ಕೂಡ...,
ಜೊತೆಗಿದ್ದರೆ ನೀ ಹೀಗೆ...!!! <3 <3

ಬುಧವಾರ, ಏಪ್ರಿಲ್ 15, 2015

ಜೊತೆ ಜೊತೆಯಲ್ಲಿ.....!!

ಮನಸು ಮರಳಿನ ಕಡಲು...
ಬೆಂದಿದೆ ಎದೆ ಒಡಲು...
ನಿಜವೆಂದ.. ಪ್ರೀತಿ ಸುಳ್ಳು ...
ಹೂ ದಾರಿ ..ನೋವ ಮುಳ್ಳು ...
ನಂಬಿಕೆಯೇ ಸೋತಿದೆ...
ಬರೆನು ನಾನು ಎಂದು..
ನಿನ್ನ ಕಥೆಯಲ್ಲಿ ...ಜೊತೆ ಜೊತೆಯಲ್ಲಿ...!

ನಿಂತ ದೋಣಿಯ ಕೆಳಗೆ...
ಕಡಲು ಚಲಿಸಿದ ಹಾಗೆ ...
ಕ್ಷಣ ನಾನು ..ಕಾಲ ನೀನು ...
ಅಜೀವ ಬಂದಿ ನಾನು ...
ಬಿಡುಗಡೆಯೇ.. ಮರಣ...
ಮಗುವಿನಂತೆ ಬರುವೆ...
ನಿನ್ನ ಜೊತೆಯಲ್ಲಿ..ಜೊತೆ ಜೊತೆಯಲ್ಲಿ...!!-

ಸೋಮವಾರ, ಅಕ್ಟೋಬರ್ 13, 2014

ಇನಿಯ...!

ಕಾಡುವ ಆ ನಿನ್ನ ನೋಟ...
ಛೇಢಿಸುವ ಆ ನಿನ್ನ ತುಂಟ ನಗು...
ಮುತ್ತಿಡಬೇಕು ಏನಿಸುವ ಗುಳಿ ಕೆನ್ನೆ...
ಅಬ್ಬಾ..ನನ್ನನೆ ಮರೆತೆನು ನಾನೀಗ...
ಶುರುವಾಗಿದೆ ಹ್ರದಯದಿ ಪ್ರೆಮ ತರಂಗ....!!

ನೀ ಸನಿಹ ಇದ್ದರೆ ಏನೋ ಆವೇಗ...
ಕಣ್ಣಲೇ ಬಚ್ಚಿಡಲಾ ಈ ನನ್ನ ತಳಮಳ...
ಬೋಗಸೆಲೇ ಉತ್ತರಿಸಲಾ...ಕೊನೆಗೂ...
ನನ್ನನೆ ಮರೆತೆನು ನಾನೀಗ....
ಶುರುವಾಗಿದೆ ಹ್ರದಯದಿ ಪ್ರೆಮ ತರಂಗ..!!! -***

ಶನಿವಾರ, ಆಗಸ್ಟ್ 23, 2014

ಮನ ಮೆಚ್ಚಿದ ಮನದಾಳದ ಮಾತು !!!...

ಕಂಡ ಕನಸು ಕೈಗೂಡದೆಂದು,
ಕನಸು  ಕಾಣುವುದ ಬಿಡಲಿಲ್ಲ ನಾ...
ನನ್ನ ಪ್ರೀತಿ ನೀನು ನೀ ಸಿಗದೇ ಹೋದರೇನಂತೆ,
ನಾ ನಿನ್ನನು ಪ್ರೀತಿಸುವುದ ಮರೆತಿಲ್ಲ,
ಈ ಮೆದುಳಿಗೆ ಮರೆವುಂಟೆ ಹೊರತು,
ಪ್ರತಿ ಕ್ಷಣ ಬಡಿಯುವ,ಈ ಪುಟ್ಟ ಹೃದಯಕ್ಕಲ್ಲ!.ಬುಧವಾರ, ಜುಲೈ 30, 2014

ಚಿತ್ತಾರ........!

ಹೃದಯದಿ ನೀ ಬರೆದೆ ಚಿತ್ತಾರವ....
ನನ್ನಲ್ಲಿ ನಾನರಿಯದ ಮರ್ಮವ......
ಈ ಬಣ್ಣದ ಚಿತ್ತಾರಕ್ಕೆ ನೀನೆ ನಾವಿಕ.....
ಆಗಂತುಕಿ  ನಾ  ಈ ವರ್ಣಮಯ ಲೋಕಕ್ಕೆ...
ಮರುಳಾದೆ ನಿನ್ನ ಮೋಹದ ಚಮತ್ಕಾರಕ್ಕೆ....!!

ಹೃದಯದಿ ಮೂಡಿದೆ ಅದ್ಭುತ  ಕಲಾಕೃತಿ!...
ನನ್ನ  ಕನಸುಗಗಳೆಲ್ಲವೂ ನಿನ್ನ ಚಿತ್ತಾರದ ಸುತ್ತ .....
ನಾ ಏನು ಹೇಳಲಿ....ಒಲವೆ.....
ನೀನೆ ವಿಶೇಷ ನನ್ನ  ಬಾಳಲಿ.....
ನನಗರಿವಾಯಿತು ಈಗ ನೀ ಅದ್ಭುತ ಕಲೆಗಾರ!!!!!.. :)-  ***