ಬುಧವಾರ, ಜುಲೈ 30, 2014

ಚಿತ್ತಾರ........!

ಹೃದಯದಿ ನೀ ಬರೆದೆ ಚಿತ್ತಾರವ....
ನನ್ನಲ್ಲಿ ನಾನರಿಯದ ಮರ್ಮವ......
ಈ ಬಣ್ಣದ ಚಿತ್ತಾರಕ್ಕೆ ನೀನೆ ನಾವಿಕ.....
ಆಗಂತುಕಿ  ನಾ  ಈ ವರ್ಣಮಯ ಲೋಕಕ್ಕೆ...
ಮರುಳಾದೆ ನಿನ್ನ ಮೋಹದ ಚಮತ್ಕಾರಕ್ಕೆ....!!

ಹೃದಯದಿ ಮೂಡಿದೆ ಅದ್ಭುತ  ಕಲಾಕೃತಿ!...
ನನ್ನ  ಕನಸುಗಗಳೆಲ್ಲವೂ ನಿನ್ನ ಚಿತ್ತಾರದ ಸುತ್ತ .....
ನಾ ಏನು ಹೇಳಲಿ....ಒಲವೆ.....
ನೀನೆ ವಿಶೇಷ ನನ್ನ  ಬಾಳಲಿ.....
ನನಗರಿವಾಯಿತು ಈಗ ನೀ ಅದ್ಭುತ ಕಲೆಗಾರ!!!!!.. :)-  ***ಶುಕ್ರವಾರ, ಜುಲೈ 25, 2014

ಹೆಸರಿಲ್ಲದಿರೊ ಬಂಧವೋ....ಜನುಮಾoತರದ ಬಂಧುವೋ...!!!

ಗೆಳೆಯ...ನೀ ಹಿಂತಿರುಗಿ ಹೊರಟೆ ಏಕೆ
ಅರಿಯದೇ ಮನದಿಂಗಿತವ.....
ಬದಲಾಯಿಸು ನನಗಾಗಿ ನಿನ್ನ
ಈ ಸಣ್ಣ ನಿರ್ಧಾರವ....!

ನಾ ನೋಡೋ ನೋಟ..
ಕಾಣೋ ಕನಸು..
ನಿದ್ದೆಯಲ್ಲಿನ ಕನವರಿಕೆಯಲ್ಲೂ
ನೀನೆ ತುಂಬಿರುವೆ....!

ಈ ಎಲ್ಲಾ ನನ್ನ ಮನದಿಂಗಿತಕ್ಕೆ..,
ಇನ್ನೇನು ಹೆಸರಿಡಬೇಕು ಅಂದುಕೊಂಡೆ,
ಆದರೆ , ನೀನೆ ಇಲ್ಲ ಸೂಚಿಸಲು!!!

ಹೆಸರಿಲ್ಲದಿರೊ ಬಂಧವೋ....ಜನುಮಾoತರದ ಬಂಧುವೋ...!!!-
                                                                                      -ನಿನ್ನ ಗೆಳತಿ..