ಪ್ರೀತಿ, ಮಮತೆ,ವಾತ್ಸಲ್ಯ,ಅಕ್ಕರೆಯ
ಸಮಾಗಮವೇ.. ಈ "ಸ್ನೇಹ"..!!
ಸರಿಸಾಟಿ ಮತ್ತೊಂದಿಲ್ಲ...ಈ ಬಾಂಧವ್ಯಕ್ಕೆ....!
ನಾ ಮರೆತರೂ..ಮರೆಯಲಾಗದ ನಿನ್ನ
ನೆನಪುಗಳ ಮೆರವಣಿಗೆ ನಾ ಇರುವವರೆಗೆ...!
ಏಕೆಂದರೆ ಮರೆವು ಮಿದುಳಿಗೆ ಹೊರತು..
ಈ ಪುಟ್ಟ ಹೃದಯಕ್ಕಲ್ಲ....!
ಅದಾಗಲೇ ಬರೆದೆ ನಾನು ನಿನ್ನ ಹೆಸರು..
ನನ್ನ ಬಾಳ ಪುಟದಲಿ....!
ನಿನ್ನ ಅನುಮತಿಗೂ ಕಾಯದೇ.....!
ಮರೆಯದೇ ಕ್ಷಮಿಸು....ಈ ನಿನ್ನ ದುರದೃಷ್ಟ ಗೆಳತಿಯ...
ಕೊನೆಯವರೆಗೂ ನಿನ್ನ ಜೊತೆಗೆ ಇರಲಾಗದೆ....
ಅರ್ಧಕ್ಕೆ ಎದ್ದು ಹೊದದ್ದಕ್ಕೆ.......!!
ಅದರರ್ಥ ಇಷ್ಟವಿರಲಿಲ್ಲ ಅಂತಲ್ಲ....ಮೊದಲೇ ಹೇಳಿದಂತೇ..ದುರದೃಷ್ಟೆಯೆಂದು.....!!
ಇದೊಂದು ನೆನಪುಗಳ ಸಂಕೋಲೆ...ನನ್ನ ಕಾಡಿ-ಬೇಡಿ ಗೋಳಾಡಿಸಿ, ತೋಳಲಾಡಿಸುವ ನನ್ನೊಳಗೇ ಎಂದೂ ಮರೆಯದ ಮಾಸದ ನಿನ್ನ ನೆನಪುಗಳ ಮೆರವಣಿಗೆ....ಹೌದು ನೆನಪುಗಳು ಜೀವನದ ಜೀವಾಳ...ಕಹಿ ನೆನಪುಗಳು ಜೀವನದ ಮೆಟ್ಟಲುಗಳಾದರೆ,ಸವಿ ನೆನಪುಗಳು ಜೀವನಕ್ಕೇ ಮುನ್ನುಡಿ...ನಿನ್ನ ನೆನಪುಗಳು ಒಂಥರಾ ಮುಂಗಾರು ಮಳೆಯಂತೆ,ಒಮ್ಮೆ ಖುಷಿಯಾಗಿ ಹ್ರದಯ ಹೂವಾದರೆ, ಮತ್ತೊಮ್ಮೆ ಅತ್ತು ಕಲ್ಲಾಗುತ್ತೆ..ನೆನಪುಗಳು ಕಾಡಿ ಬೇಡಿದರೂ ಕೊನೆಗೇ ಕಣ್ಣಿರಾಗಿ ಮೌನದಿಂದ ಮುಕ್ತಾಯವಾಗುತ್ತವೆ.ಆದರೂ ಬರೆದೆ ನಾನು ನಿನ್ನ ಹೆಸರ ನನ್ನ ಬಾಳ ಪುಟದಲಿ..ಎಂದೂ ಅಳಿಯದಂತೆ..ಆ ಭಾವನೆಗಳ ಸ್ತಬ್ದರೂಪವೇ ಈ ಮೌನರಾಗ..ಮರೆತರೂ ಮರೆಯಲಾಗದ ನನ್ನೊಳಗಿನ ನೀನು..!!!
ಬುಧವಾರ, ಮಾರ್ಚ್ 14, 2018
ಸ್ನೇಹಿತ..!!
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)