ಭಾವಾಂತರ: ಭಾವನೆ-ಅಗಲಿಕೆಗಳ ಬೆಸುಗೆ...!!!
ಇದೊಂದು ನೆನಪುಗಳ ಸಂಕೋಲೆ...ನನ್ನ ಕಾಡಿ-ಬೇಡಿ ಗೋಳಾಡಿಸಿ, ತೋಳಲಾಡಿಸುವ ನನ್ನೊಳಗೇ ಎಂದೂ ಮರೆಯದ ಮಾಸದ ನಿನ್ನ ನೆನಪುಗಳ ಮೆರವಣಿಗೆ....ಹೌದು ನೆನಪುಗಳು ಜೀವನದ ಜೀವಾಳ...ಕಹಿ ನೆನಪುಗಳು ಜೀವನದ ಮೆಟ್ಟಲುಗಳಾದರೆ,ಸವಿ ನೆನಪುಗಳು ಜೀವನಕ್ಕೇ ಮುನ್ನುಡಿ...ನಿನ್ನ ನೆನಪುಗಳು ಒಂಥರಾ ಮುಂಗಾರು ಮಳೆಯಂತೆ,ಒಮ್ಮೆ ಖುಷಿಯಾಗಿ ಹ್ರದಯ ಹೂವಾದರೆ, ಮತ್ತೊಮ್ಮೆ ಅತ್ತು ಕಲ್ಲಾಗುತ್ತೆ..ನೆನಪುಗಳು ಕಾಡಿ ಬೇಡಿದರೂ ಕೊನೆಗೇ ಕಣ್ಣಿರಾಗಿ ಮೌನದಿಂದ ಮುಕ್ತಾಯವಾಗುತ್ತವೆ.ಆದರೂ ಬರೆದೆ ನಾನು ನಿನ್ನ ಹೆಸರ ನನ್ನ ಬಾಳ ಪುಟದಲಿ..ಎಂದೂ ಅಳಿಯದಂತೆ..ಆ ಭಾವನೆಗಳ ಸ್ತಬ್ದರೂಪವೇ ಈ ಮೌನರಾಗ..ಮರೆತರೂ ಮರೆಯಲಾಗದ ನನ್ನೊಳಗಿನ ನೀನು..!!!
ಭಾನುವಾರ, ಜೂನ್ 6, 2021
ಆತ್ಮಬಂಧು...!!!
ಬುಧವಾರ, ಮಾರ್ಚ್ 14, 2018
ಸ್ನೇಹಿತ..!!
ಪ್ರೀತಿ, ಮಮತೆ,ವಾತ್ಸಲ್ಯ,ಅಕ್ಕರೆಯ
ಸಮಾಗಮವೇ.. ಈ "ಸ್ನೇಹ"..!!
ಸರಿಸಾಟಿ ಮತ್ತೊಂದಿಲ್ಲ...ಈ ಬಾಂಧವ್ಯಕ್ಕೆ....!
ನಾ ಮರೆತರೂ..ಮರೆಯಲಾಗದ ನಿನ್ನ
ನೆನಪುಗಳ ಮೆರವಣಿಗೆ ನಾ ಇರುವವರೆಗೆ...!
ಏಕೆಂದರೆ ಮರೆವು ಮಿದುಳಿಗೆ ಹೊರತು..
ಈ ಪುಟ್ಟ ಹೃದಯಕ್ಕಲ್ಲ....!
ಅದಾಗಲೇ ಬರೆದೆ ನಾನು ನಿನ್ನ ಹೆಸರು..
ನನ್ನ ಬಾಳ ಪುಟದಲಿ....!
ನಿನ್ನ ಅನುಮತಿಗೂ ಕಾಯದೇ.....!
ಮರೆಯದೇ ಕ್ಷಮಿಸು....ಈ ನಿನ್ನ ದುರದೃಷ್ಟ ಗೆಳತಿಯ...
ಕೊನೆಯವರೆಗೂ ನಿನ್ನ ಜೊತೆಗೆ ಇರಲಾಗದೆ....
ಅರ್ಧಕ್ಕೆ ಎದ್ದು ಹೊದದ್ದಕ್ಕೆ.......!!
ಅದರರ್ಥ ಇಷ್ಟವಿರಲಿಲ್ಲ ಅಂತಲ್ಲ....ಮೊದಲೇ ಹೇಳಿದಂತೇ..ದುರದೃಷ್ಟೆಯೆಂದು.....!!
ಬುಧವಾರ, ಮೇ 27, 2015
ಬುಧವಾರ, ಏಪ್ರಿಲ್ 15, 2015
ಜೊತೆ ಜೊತೆಯಲ್ಲಿ.....!!
ಬೆಂದಿದೆ ಎದೆ ಒಡಲು...
ನಿಜವೆಂದ.. ಪ್ರೀತಿ ಸುಳ್ಳು ...
ಹೂ ದಾರಿ ..ನೋವ ಮುಳ್ಳು ...
ನಂಬಿಕೆಯೇ ಸೋತಿದೆ...
ಬರೆನು ನಾನು ಎಂದು..
ಸೋಮವಾರ, ಅಕ್ಟೋಬರ್ 13, 2014
ಇನಿಯ...!
ಛೇಢಿಸುವ ಆ ನಿನ್ನ ತುಂಟ ನಗು...
ಮುತ್ತಿಡಬೇಕು ಏನಿಸುವ ಗುಳಿ ಕೆನ್ನೆ...
ಅಬ್ಬಾ..ನನ್ನನೆ ಮರೆತೆನು ನಾನೀಗ...
ಶುರುವಾಗಿದೆ ಹ್ರದಯದಿ ಪ್ರೆಮ ತರಂಗ....!!
ಕಣ್ಣಲೇ ಬಚ್ಚಿಡಲಾ ಈ ನನ್ನ ತಳಮಳ...
ಬೋಗಸೆಲೇ ಉತ್ತರಿಸಲಾ...ಕೊನೆಗೂ...
ನನ್ನನೆ ಮರೆತೆನು ನಾನೀಗ....
ಶುರುವಾಗಿದೆ ಹ್ರದಯದಿ ಪ್ರೆಮ ತರಂಗ..!!! -***
ಶನಿವಾರ, ಆಗಸ್ಟ್ 23, 2014
ಬುಧವಾರ, ಜುಲೈ 30, 2014
ಚಿತ್ತಾರ........!
ನನ್ನಲ್ಲಿ ನಾನರಿಯದ ಮರ್ಮವ......
ಈ ಬಣ್ಣದ ಚಿತ್ತಾರಕ್ಕೆ ನೀನೆ ನಾವಿಕ.....
ಆಗಂತುಕಿ ನಾ ಈ ವರ್ಣಮಯ ಲೋಕಕ್ಕೆ...
ಮರುಳಾದೆ ನಿನ್ನ ಮೋಹದ ಚಮತ್ಕಾರಕ್ಕೆ....!!
ಹೃದಯದಿ ಮೂಡಿದೆ ಅದ್ಭುತ ಕಲಾಕೃತಿ!...
ನನ್ನ ಕನಸುಗಗಳೆಲ್ಲವೂ ನಿನ್ನ ಚಿತ್ತಾರದ ಸುತ್ತ .....
ನಾ ಏನು ಹೇಳಲಿ....ಒಲವೆ.....
ನೀನೆ ವಿಶೇಷ ನನ್ನ ಬಾಳಲಿ.....
ನನಗರಿವಾಯಿತು ಈಗ ನೀ ಅದ್ಭುತ ಕಲೆಗಾರ!!!!!.. :)- ***