ಶನಿವಾರ, ಮೇ 31, 2014

ಏನೋ ಒಂಥರಾ ಅನುಭವ..!

ಮನಸ್ಸಿನಲ್ಲಿ ಬಚ್ಚಿಟ್ಟುಕೊಂಡಿದ್ದ ಸುಪ್ತ ಭಾವನೆಗಳು
ಚಿಗುರೊಡೆಯುವ ಕಾಲ ಸಮೀಪಿಸುತ್ತಿದೆ..!
ಭಾವನೆ-ಕನಸುಗಳು ಕಾಲಿಗೆ ಗೆಜ್ಜೆ ಕಟ್ಟಿ ಸಜ್ಜಾಗಿವೆ
ಈಗ ನನ್ನ ಪರಿಸ್ಥಿತಿ, ವರುಣನ ಆಗಮನಕ್ಕೆ,
ಪರಿತಪಿಸಿ ಕಾಯುತ್ತಿರುವ ಧರೆಗೆ ಸಮ!!!!..






ಶುಕ್ರವಾರ, ಮೇ 30, 2014

ಕಾತರ!!!!

ಹಸಿದ ಭಾವನೆಗಳೇಲ್ಲವೂ ಹುಸಿಯಾಗಿದೆ ಒಲವೇ.....
ನೀ  ಬಾರದೇ, ಎಲ್ಲಾ ಬರಿದಾಯಿತು ಒಲವೇ....
ನೀ ಯಾವಾಗ ಬರುವೆ, ನಾನರಿಯೆ...
ಆದರೂ ಪರಿತಪಿಸುವೆ ಒಲವೇ...
ನಿನಗಾಗಿ ...ನಿನ್ನ ಒಲವಿಗಾಗಿ...!!

ನೀ ನನಗಾಗಿ ಆಡಿದ ಮಾತುಗಳೇಷ್ಟೋ...
ಇಟ್ಟ ಆಣೆ-ಭರವಸೆಗಳೇಷ್ಟೋ..
ಅದೆಲ್ಲಾ ನೆನಪಾದರೆ ಸುಳ್ಳೋ-ನಿಜವೋ..
ಅನುಮಾನವೂ ನನಗೆ....
ಆದರೂ ಪರಿತಪಿಸುವೆ ಒಲವೇ...
ನಿನಗಾಗಿ ...ನಿನ್ನ ಒಲವಿಗಾಗಿ...!!

ಕಾದು ಕಣ್ಣಿನ ನೋಟ ದೂರಾಗುತ್ತಿದೆ..
ನಂಬಿಕೆಗಳೆಲ್ಲವೂ ಸುಳ್ಳಾಗುತ್ತಿದೆ...
ಭರವಸೆ-ಭಾವನೆಗಳೇಲ್ಲವೋ ನರಳುತಿದೆ...
ಅವೆಲ್ಲವೂ ನಿನ್ನ ಮರೆಯುವುದರೊಳಗೆ...
ನೀ ಬಂದು ಸೇರು ನನ್ನಲ್ಲಿಗೆ...
ಪರಿತಪಿಸುವೆ ಒಲವೇ...
ನಿನಗಾಗಿ ...ನಿನ್ನ ಒಲವಿಗಾಗಿ.....!!!                

                                                    -ಇಂತಿ ನಿನ್ನ ನಿರೀಕ್ಷೆಯಲ್ಲಿ
                                                            ನಿನ್ನ ಗೆಳತಿ.
                                                       




                       
  





ಬುಧವಾರ, ಮೇ 7, 2014

ಚಂದಮಾಮ!...

ಹುಣ್ಣಿಮೆಯ ದಿನ ಬೆಳದಿಂಗಳಾಗುವೆ..
ಅಮಾವಾಸ್ಯೆಯ ದಿನ ಕರಿ ಮುಗಿಲಾಗುವೆ...
ಮಗುವಾಗಿನ ಆಟಿಕೆನು ನೀನೆ...
ತಾರುಣ್ಯದ ಗೆಳೆಯನು  ನೀನೆ...
ನಿನ್ನ ಜೊತೆಯೇ ನನ್ನ ಕನಸುಗಳ  ಜೋಡಣೆ....
ಆದರೂ..ನನಸಾಗಲಿಲ್ಲ ನನ್ನ ಈ ಪರಿಕಲ್ಪನೆ!!!....- Feeling Missed!






ಶನಿವಾರ, ಮೇ 3, 2014

ಓ ಮನಸೇ....ನೀ ಹೀಗೇಕೆ......?

ಓ ಮನಸೇ....ನೀ ಹೀಗೇಕೆ...
ಬೇಡವೆಂದರೂ..ಕದ ತಟ್ಟಿ ಎಬ್ಬಿಸುತ್ತಿರುವೆ ..ನೆನಪುಗಳ ಸಾಮ್ರಾಜ್ಯವನ್ನು...!
ಮೌನಕ್ಕೆ ಇರುವ ಮೌಲ್ಯ, ಮಾತಿಗೆ ಇಲ್ಲ..ಕಣೇ..!
ಅದಿಕ್ಕೆ ಅಂತಾರೆ , "ಮಾತು ಬೆಳ್ಳಿ , ಮೌನ ಬಂಗಾರ"!!!!!!!!.

ಓ....ಮನಸೇ.....ಒಮ್ಮೆ ಕ್ಷಮೆ ಯಾಚಿಸುವೆಯಾ.....

                                                         

  ಹೇಯ್  ಹೇಗಿದ್ದಿಯೋ  ಪೆದ್ದು ,   ಹೇಗಿದ್ದೀಯಾ ಅಂತ ನಾನು  ನಿನ್ನನ್ನು ಕೇಳೋದಿಲ್ಲ, ಏಕೆಂದರೆ ನನಗೆ ಗೊತ್ತು ನೀನು ಚೆನ್ನಾಗೇ ಇರ್ತೀಯ ಅಂತ.ಖುಷಿಯಿಂದ ಇರ್ತೀಯ ಅಂತ..ನಿನ್ನ  ಸ್ವಭಾವವೇ ಅಂತಹದ್ದು..ಯಾರಿಗೆ ಎಷ್ಟೇ ನಿನ್ನಿಂದ ನೋವಾದರೂ, ನೀನು ಮಾತ್ರ ಕ್ಷಮೆ ಕೇಳೋದೇ ಇಲ್ಲ..ಬಹುಶಃ ಅದು ತಪ್ಪು ಅನ್ನಿಸೋದಿಲ್ವಾ ಅಥವಾ ಅನ್ನಿಸಿ ಕೂಡ ಸುಮ್ಮನೆ  ಇರ್ತೀಯ ಗೊತ್ತಿಲ್ಲ...  ಪರವಾಗಿಲ್ಲ ಹಾಗೇ ಇರು..ಚೆನ್ನಾಗಿರು.

ನಾನು ಚಿಕ್ಕಂದಿನಿಂದಲೂ ತುಂಬಾ ಯಾರ ತಂಟೆಗೂ ಹೋಗ್ತಾ ಇರಲಿಲ್ಲ..ಆದರೆ ತುಂಬಾ ತುಂಟತನ, ಹಠಮಾರಿತನ ಮತ್ತು ಕೋಪದಿಂದ ಮನೆಯಲ್ಲಿ  ಎಲ್ಲರ ಬೈಸಿಕೊಳ್ಳುತ್ತಾ ಇದ್ದೆ. ಅದರೆ ನೀನು  ಯಾವತ್ತೂ ನನ್ನ ಬೈದವನೇ ಅಲ್ಲ. ನನ್ನದು ಯಾರನ್ನು ಹಚ್ಚಿಕೊಳ್ಳುವ ಸ್ವಭಾವವಲ್ಲ. ಆದರೆ ನಿನ್ನ ತರ್ಲೆ, ತುಂಟತನದಿಂದ ನನ್ನನ್ನು ನಿನ್ನೆಡೆಗೆ ಸೆಳೆದಿದ್ದೆ.
ನನಗೆ ಪ್ರಕೃತಿ ಅಂದ್ರೆ ತುಂಬಾ ಇಷ್ಟ. ನಾನು ಯಾವಾಗಲು ಏಕಾಂತವನ್ನು ಬಯಸೋ ಹುಡುಗಿ.ಆದರೆ ಆ ನನ್ನ  ಏಕಾಂತದ
ಅರಮನೆಯ  ಬಾಗಿಲು ನೀ  ತಟ್ಟಿದ್ದೇ.ನಾ ನಿನ್ನನ್ನ  ಯಾವತ್ತೂ ನನ್ನ ಕನಸಿನ ಲೋಕಕ್ಕೆ  ಆಹ್ವಾನಿಸಿರಲಿಲ್ಲ.ಕರೆಯದೇ ಬಂದ
ಅಥಿತಿ ನೀನು.. ತರ್ಲೆ,  ತುಂಟತನ, ನಗು, ಕೋಪ ಇವೆಲ್ಲವುಗಳೊಂದಿಗೆ  ಸಾಗಿತ್ತು ನಮ್ಮ ಈ ಸ್ನೇಹ....

ನಾ ನಿನ್ನ ಜೊತೆ ತುಂಬಾ ಮಾತಾಡ್ತ ಇದ್ದೆ.ನನ್ನ ಮನಸಿನಲ್ಲಿರೊ ಎಲ್ಲಾವನ್ನು  ಮನಸ್ಸು ಬಿಚ್ಚಿ ಹಂಚಿಕೊಳ್ತಾಇದ್ದೆ.ನೀನೂ ಅಷ್ಟೆ. ನಿನಗೆ ನೆನಪಿದ್ಯಾ, ನಾವು ಒಂದಿನ ಕಾಲೇಜಿನಲ್ಲಿ ಜಗಳ ಮಾಡ್ಕೊಂಡು ಇದ್ವು, ನೀನು ಕ್ಲಾಸಿಗೆ ಕೂರಲ್ಲ ಅಂತ  ಕ್ಲಾಸ್ ಮಧ್ಯೆ ಎದ್ದು ಹೋದೆ.ನಾ ನಿನ್ನ ಜೊತೆ ಮಾತಾನಾಡದೇ ಇದ್ದಿದ್ದರಿಂದ ನಾನು ಸುಮ್ಮನಾದೆ.ನಿಂಗೆ ಕ್ರಿಕೆಟ್ ಅಂದ್ರೆ ತುಂಬಾ   ಇಷ್ಟ.ಬೇರೆ ದಿನ ನೀ ಕ್ಲಾಸ್ ಇದ್ದಾಗ ಆಡೋಕೆ ಹೊರಟರೆ ಅವಾಗ ನಾ ನಿನ್ನ ಹೋಗೋಕೆ ಬಿಡ್ತಾ ಇರಲಿಲ್ಲ ನನ್ನ ಮಾತಿಗೆ ಇಲ್ಲ ಅಂತ ನೀನು ಯಾವತ್ತೂ ಹೇಳ್ತಾ ಇರಲಿಲ್ಲ.ಆವತ್ತು ಕೂಡ ನೀನು ನಾ ಹೋಗ್ಬೇಡ ಅಂತ ಹೇಳ್ತಾಳೆ ಅನ್ಕೊಂಡು ನನ್ನ ಮುಖ ನೋಡಿದೆ ನಾ ಅದಕ್ಕೂ  ನಂಗೂ ಸಂಬಂಧವೇ  ಇಲ್ಲ ಅಂತ ಮುಖ ತಿರುಗಿಸಿದೆ . ನಮ್ಮಿಬ್ಬರ ಸ್ನೇಹದ   ಬಗ್ಗೆ ಚೆನ್ನಾಗಿ ಅರಿತಿದ್ದ,  ನಮ್ಮ ನೆಚ್ಚಿನ ಲೆಕ್ಚರರ್ ನಮ್ಮಿಬ್ಬರನ್ನು ಕರೆದು, ನಮ್ಮ ಸ್ನೇಹ ಹೊಗಳಿ,ಇನ್ನು  ಮುಂದೆ ಜಗಳ  ಮಾಡ್ಕೋಬೇಡಿ,  ಅಂತ ಬುದ್ದಿಮಾತು ಹೇಳಿ ಕಳಿಸಿದ್ದರು.ನೀನು ಮನೇಲೂ ಕೂಡ ನಿಮ್ಮ ಅಪ್ಪನ ಮಾತು ಕೇಳದೇ ಇದ್ದಾಗ ,ಅಂಕಲ್ಎಷ್ಟೋಸರಿ ನೀ ಅವನಿಗೆ ಹೀಗೆ ಮಾಡಬೇಡ ಅಂತ ಹೇಳು ಅಂತ ನನಗೆ ಹೇಳ್ತಾ ಇದ್ದರು. ಅವರಿಗೆ ನಿನ್ನ ಕಂಡರೆ ಬೆಟ್ಟದಷ್ಟು ಪ್ರೀತಿ.ಹಾಗೇ   ನಮ್ಮ  ಸ್ನೇಹ ಎಲ್ಲರ  ನೆಚ್ಚಿಗೆಗೆ ಪಾತ್ರವಾಗಿತ್ತು .

ನಮ್ಮ ಸ್ನೇಹ ಯಾವುದೇ ಅಡೆ-ತಡೆ ಇಲ್ಲದೆ ,ಮುಗಿಲೆತ್ತರಕ್ಕೆ ಬೆಳೀತಾನೆ ಇತ್ತು. ಸ್ನೇಹ ಬೆಳೆದ ಹಾಗೇ  ನಾವು ಬೆಳೀತಾ ಇದ್ವಿ..ಬರ್ತಾ, ಬರ್ತಾ ನೀ ನನ್ನ ತುಂಬಾ ಡಾಮಿನೇಟ್   ಮಾಡೋಕೆ ಶುರು ಮಾಡ್ಕೊಂಡೆ.ಅದು ನನಗೆ ಹಿಂಸೆಯಾದರೂ ಸಹಿಸಿಕೊಂಡು,ನಿನ್ನ ಮಾತಿನಂತೆ ನಡೀತಾ ಇದ್ದೆ.ಹೀಗಿದ್ದ ಸ್ನೇಹದ ಅರಮನೆ ಬಿರುಗಾಳಿಗೆ ಸಿಕ್ಕಿ
ಕುಸಿದು  ಬೀಳುತ್ತೆ  ಅನ್ನೋ ಸಣ್ಣ ಕಲ್ಪನೆ ಕೂಡ ನಮಗಿರಲಿಲ್ಲ. ಅಂತೂ ಪದವಿಯ ಕೊನೆ ಹಂತ ಶುರುವಾಯಿತು..ಒಂದು ಕಡೆ ಪರೀಕ್ಷೆ
ತಯಾರಿ, ಗೊಂದಲಗಳು,Convocation ಪಡೆಯುವ ಕಾತರ,  ನೀವಿನ್ನೂ  ಚಿಕ್ಕ ಮಕ್ಕಳು  ಅಲ್ಲ.ಡಿಗ್ರಿ ಸ್ಟೂಡೆಂಟ್ಸ್,  ದೊಡ್ಡವರಾಗಿದ್ದೀರಾ,ಇನ್ನು ನಿಮ್ಮಭವಿಷ್ಯ ನಿಮ್ಮ ಕೈಲಿದೆ,ನಿಮ್ಮ ಒಂದು ಒಳ್ಳೆಯ ನಿರ್ಧಾರ ಇಡೀ ನಿಮ್ಮ ಜೀವನದ ತಳಪಾಯಅನ್ನೋ ಲೆಕ್ಚರರ್ ಮತ್ತು ತಂದೆ ತಾಯಿಯರ ಬುದ್ದಿ ಮಾತು ಇವೆಲ್ಲವೂಗಳ ಮಧ್ಯೆ, ನಾವು, ನಮ್ಮ ಸ್ನೇಹ ದಿಕ್ಕಾಪಾಲಾಗಿ   ಹೋಗುತ್ತೆ ಅನ್ನೋ ಭಯ..,

ಕೊನೆಗೂ ಚಂಡಮಾರುತ ಬೀಸೋಕೆ ಶುರುವಾಗಿ ನಮ್ಮ ಸ್ನೇಹದ ಅರಮನೆ ಅಲುಗಾಡೋಕೆ  ಶುರುವಾಯಿತು.. ಪರೀಕ್ಷೆಗೆ ಒಂದು ತಿಂಗಳು ಬಾಕಿ ಇದೆ ಅನ್ನೋವಾಗ ,ಇದ್ದಕ್ಕಿದ್ಹ ಹಾಗೆ,ನಿನಗೆ ನನ್ನ ಬಗ್ಗೆ ತಾತ್ಸಾರ, ಉದಾಸೀನ  ಶುರುವಾಯಿತು.ನನ್ನ ನಿನ್ನ ಶತ್ರು ಥರ ನೋಡಲಾರಂಭಿಸಿದೇ...ನಾನು ನಿನ್ ಮಾತಾನಾಡಿಸೀದಾಗಲೆಲ್ಲಾ,  ಮುಖ  ಮುರಿಯುವುದು ಮಾಡ್ತಿದ್ದೆ....ನನ್ನ ಕಣ್ಣು ತಪ್ಪಿಸಿ ಓಡಾಡಲು ಶುರು ಮಾಡಿದೆ ನೀನು..
ಅವತ್ತಿನ ದಿನ ನೀನು  ಮರೆತಿರಬೇಕು,. ಆದರೆ ನಾನು ಮರೆಯೋಕೆ ಸಾದ್ಯವೇ ಇಲ್ಲ.... ಆವತ್ತು ಕಾಲೇಜಿನಲ್ಲಿ ಬೀಳ್ಕೊಡುಗೆ ಸಮಾರಂಭ, ಏರ್ಪಟ್ಟಿತ್ತು..ಆ ದಿನಎಲ್ಲರೂ Colourful ಆಗಿ ಕಾಣ್ತಾ ಇದ್ದರು. ಕಾಮನಬಿಲ್ಲಿನ ಚಿತ್ತಾರವೇ ಅಲ್ಲಿತ್ತು..ಇಂದು ಕೊನೆ ದಿನ..ನಿನ್ನನ್ನು ಮಾತಾಡಿಸಬೇಕು, ಈ ದಿನ ನಿನ್ ಜೊತೆ ಕಳೀಬೇಕು ಅನ್ಕೊಂಡು ಬಂದವಳಿಗೆ, "ನೀ ಹೇಳಿದ ಒಂದೇ ಮಾತು ಇವತ್ತೊಂದು ದಿನವಾದರೂ ಖುಷಿಯಿಂದ ಇರೋಕೆ ಬಿಡು..ಇನ್ನು ಮುಂದೆ ನನ್ನ ಮಾತಾಡಿಸಿ ಹಿಂಸೆ ಕೊಡಬೇಡ...ನನಗೆ ನಿನ್ಜೊತೆ ಮಾತಾಡೋಕೆ ಇಷ್ಟ ಇಲ್ಲ..ಇನ್ನು ಮುಂದೆ ನಿನ್ನ ಮುಖ ನೋಡೋದು ತಪ್ಪುತ್ತೆ, ಥ್ಯಾಂಕ್ ಗಾಡ್!  ಅಂತ ಮುಖಕ್ಕೆಹೊಡೆದಂತೆ  ಸರ್ರನೆ ಹೊರಟು ಹೋದೆ.ನನಗೆ  ಒಂದು  ಕ್ಷಣಭೂಮಿ ಬಾಯ್ತೆರೆದು ನುಂಗ ಬಾರದೇ ಅನ್ನಿಸಿದರೂ, ಸಾವರಿಸಿಕೊಂಡು, Function Hall..ನತ್ತ     ಹೋದೆ. ಅಲ್ಲಿ ಯಾರೊಬ್ಬರ ಮಾತು ಕಿವಿಗೆ ಬೀಳಲಿಲ್ಲ .ನಿನ್ನ ಮಾತುಗಳೇ ಕಿವಿಯೊಳಗೆ ಅಲೆದಾಡುತ್ತಿದ್ದವು..ಕೊನೆಗೂ Function ಮುಗಿಸಿ ಮನೆಯತ್ತ ಹೆಜ್ಜೆ ಹಾಕಿದೆ ಒಲ್ಲದ ಮನಸ್ಸಿನಿಂದ.
ಪರೀಕ್ಷೆಗಳು ಶುರುವಾಯಿತು,  ನಿನ್ನ ಬಗ್ಗೆ ಇದ್ದ ನಂಬಿಕೆ, ವಿಶ್ವಾಸ, ಪ್ರೀತಿ ಎಲ್ಲವನ್ನೂ ಆ ನಿನ್ನ ಮಾತು ನುಂಗಿ ಹಾಕಿತ್ತು..
ನೀ  ಹಾಗೆ ಮಾಡಿದ್ದಕ್ಕೆ, ಉತ್ತರ ಸಿಗದೆ ಒದ್ದಾಡುತ್ತಿದ್ದ ನನಗೆ ನಿನ್ನ  ಕ್ಲೋಸ್  ಫ್ರೆಂಡ್  ಹೇಳಿದಾಗಲೇ  ಅರಿವಾಗಿದ್ದು.. ಪರೀಕ್ಷೆ ಕೊನೆಯ ದಿನಎಲ್ಲ ಕ್ಲಾಸ್ ಫ್ರೆಂಡ್ಸ್ ಗೂ ಶುಭ ಹಾರೈಸಿ ಮನೆಗೆ ಹೊರಡುವವಳಿದ್ದೇ...ಎಲ್ಲರ ಕೈ ಕುಲುಕಿ
ಹೊರಟವವಳಿಗೆ ನೀ ನೋಡಿದ ಆ ಕೊನೆಯ ನೋಟ! ನೂರು ಮಾತುಗಳನ್ನು ಸಹ ಕಣ್ಣಲ್ಲೇ ಹೇಳಿದಂತಿತ್ತು..

ಇಂದಿಗೆ ಮೂರು ವರ್ಷಗಳೇ ಕಳೆದಿವೆ..ನಾವಿಬ್ಬರೂ ದೂರಾಗಿ..ಹೇಯ್ ಪೆದ್ದು ನಿನ್ನ ಹುಡುಗಿ ಹೇಗಿದ್ದಾಳೆ...ಆ ಪ್ರೀತಿಗಾಗಿ
ತಾನೇ ,ನೀ ನನ್ನ ಸ್ನೇಹವನ್ನು ಧಿಕ್ಕರಿಸಿ ಹೋದದ್ದೂ......ನಾನು ಅಷ್ಟೊಂದು ಕೆಟ್ಟವಳಲ್ಲ ಕಣೋ..ನನಗೆ ನೀ ನಿನ್ ಪ್ರೀತಿ  ಬಗ್ಗೆ ಹೇಳಿದ್ದಿದ್ದರೆ,  ನನ್ನಷ್ಟು  ಖುಷಿ ಪಡೋರು  ಇನ್ನೊಬ್ರು ಇರ್ತಾ  ಇರಲಿಲ್ಲ ಗೊತ್ತಾ.... ನನಗೆ ನಿನ್ನ ಮೇಲೆ ಕೋಪ ಇಲ್ಲ..ಒಂದೇ ಒಂದು ಯಾವಾಗ್ಲು ಕಾಡೋ..ಪ್ರಶ್ನೆ..ನಿನಗೆ ನೀನು ಮಾಡಿದ್ದು ತಪ್ಪು ಅನ್ನಿಸಲೇ  ಇಲ್ವೇನೋ..   ಕ್ಷಮೆ ಕೇಳಬೇಕು ಅಂತ ಅನ್ನಿಸಲೇ ಇಲ್ವಾ...ನೀ ಯಾಕೋ ಹೀಗೆ...ಇರಲಿ ಬಿಡು ಪರವಾಗಿಲ್ಲ....ಆದ್ರೆ ಈ ಜನ್ಮದಲ್ಲಿ ನಿನ್ನ ಸ್ಥಾನ ಯಾರಿಗೂ ಇಲ್ಲ..ನೀನೆ ನನ್ನ ಬೆಸ್ಟ್ ಫ್ರೆಂಡ್ ಯಾವಾಗಲು......
ನನ್ನದೊಂದು ಕೋರಿಕೆ ಕಣೋ ...ಪೆದ್ದು .."ಜೀವನದಲ್ಲಿ ಯಾವತ್ತಾದ್ರೂ  ಒಂದು ದಿನ ನಾವಿಬ್ಬರು ಅದರೂ-ಬದರಾದರೆ, ಕಣ್ಣಲ್ಲೇ ಕ್ಷಮೆಯಾಚಿಸುವೆಯಾ"...ಪ್ಲೀಸ್ ಪ್ಲೀಸ್  !

"    ಮೋಸದ ಪ್ರೀತಿ ಇರಬಹುದು, ಆದರೆ ಮೋಸದ ಸ್ನೇಹ ಇರೋಕೆ ಸಾದ್ಯವಿಲ್ಲ....ಸ್ನೇಹದಲ್ಲಿ ಮೋಸ ಹೋದವರು ಮತ್ತೆ ಮೋಸ ಮಾಡಿದವರನ್ನು  ಕ್ಷಮಿಸುವುದು ಇಲ್ಲ.......!"


                                                                                                                             ಇಂತಿ ನಿನ್ನ ಗೆಳತಿ
                                                                                                                                     chukki..