ಶುಕ್ರವಾರ, ಜುಲೈ 25, 2014

ಹೆಸರಿಲ್ಲದಿರೊ ಬಂಧವೋ....ಜನುಮಾoತರದ ಬಂಧುವೋ...!!!

ಗೆಳೆಯ...ನೀ ಹಿಂತಿರುಗಿ ಹೊರಟೆ ಏಕೆ
ಅರಿಯದೇ ಮನದಿಂಗಿತವ.....
ಬದಲಾಯಿಸು ನನಗಾಗಿ ನಿನ್ನ
ಈ ಸಣ್ಣ ನಿರ್ಧಾರವ....!

ನಾ ನೋಡೋ ನೋಟ..
ಕಾಣೋ ಕನಸು..
ನಿದ್ದೆಯಲ್ಲಿನ ಕನವರಿಕೆಯಲ್ಲೂ
ನೀನೆ ತುಂಬಿರುವೆ....!

ಈ ಎಲ್ಲಾ ನನ್ನ ಮನದಿಂಗಿತಕ್ಕೆ..,
ಇನ್ನೇನು ಹೆಸರಿಡಬೇಕು ಅಂದುಕೊಂಡೆ,
ಆದರೆ , ನೀನೆ ಇಲ್ಲ ಸೂಚಿಸಲು!!!

ಹೆಸರಿಲ್ಲದಿರೊ ಬಂಧವೋ....ಜನುಮಾoತರದ ಬಂಧುವೋ...!!!-
                                                                                      -ನಿನ್ನ ಗೆಳತಿ..
1 ಕಾಮೆಂಟ್‌: